Friday, February 12, 2010

ಕೈಲಾಸ ಮಾನಸ ಸರೋವರ ಯಾತ್ರೆ

Mt. Kailash Manasarovar Holy Yatra








ಇತ್ತೀಚಿಗೆ ೨೦೦೮ನೇ ಸಾಲಿನ ಸೆಪ್ಟಂಬರ್ ತಿಂಗಳಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡಿದ್ದ ತಮ್ಮ ಅನುಭವ.

Where the Heaven meets the Earth

The trip of a lifetime...or many lifetimes -An Ultimate & A Blissful Yatra

"Conventional wisdom says a single circuit of Mt. Kailash wipes out the sins of a lifetime, 108 parikramas guarantees enlighttenment. A ritual bath in the sacred Manasa Sarovar lake will deliver a pilgrim to Brahma's paradise and a drop drink of its water relinquishes the sins of hundred lifetimes."

"There are no mountains like the Himalaya, for in them are Kailash and Mansarovar. As the dew is dried up by the morning Sun, so are the sins of mankind dried up by the sight of the Himalaya." -Skanda Puran



ಜೀವನದ ಸಾರ್ಥಕತೆ ಅಂದರೆ ಕೈಲಾಸ ಮಾನಸ ಸರೋವರ ಯಾತ್ರೆ ಎಂದು ಹೇಳಬಹುದು.ಈ ಯಾತ್ರೆಯ ಅನುಭವ ಅವರ್ಣನೀಯ.ಪ್ರತಿಯೊಬ್ಬರು ಅನುಭವಿಸಲೇಬೇಕಾದ ಬಗೆ ಬಗೆಯ ವಿಚಾರಗಳು ಈ ಯಾತ್ರೆಯಲ್ಲಿವೆ.ಕೈಲಾಸ ಮಾನಸ ಸರೋವರದ ವರ್ಣನೆ ಮತ್ತು ಹಿರಿಮೆಗಳನ್ನು ಅನುಭವಿಸಿಯೇ ತಿಳಿಯಬೇಕು. ಕೈಲಾಸ ಮಾನಸ ಸರೋವರವು ಚೀನಾ ದೇಶದ ಟಿಬೆಟ್ ರಾಜ್ಯದಲ್ಲಿದೆ. ಈ ಯಾತ್ರೆಯು ಹಿಂದೂ ಧರ್ಮದವರಿಗೆ ಅಸಾಮಾನ್ಯವಾಗಿದ್ದು ಅಲ್ಲಿನ ಪರಿಸರ ಅಂದರೆ ಭೂಮಿ ಜಲ ಅಗ್ನಿಗಳ ಉಪಯೋಗದಿಂದ ಆ ಸ್ಥಳಕ್ಕೆ ಪಾವಿತ್ಯ್ರತೆ ಹೆಚ್ಚಿದೆ. ತೀರ್ಥಕ್ಷೇತ್ರಗಳಲ್ಲಿ ದೊರಕುವ ಅಧ್ಯಾತ್ಮಿಕ ಮತ್ತು ಮಾನಸಿಕ ಉನ್ನತಿ ಪ್ರತಿಯೊಬ್ಬರ ಜೀವನದಲ್ಲಿ ಅವಿಸ್ಮರಣೀಯ ಘಟನೆಯಾಗಿ ಉಳಿಯಬಲ್ಲದು. ಮಾನಸ ಸರೋವರವು ಅತಿ ಪವಿತ್ರವಾದದ್ದು. ಇದು ಬ್ರಹ್ಮನ ಮನಸ್ಸಿನಿಂದಲೇ ನಿಮಾಣವಾದ್ದರಿಂದ ಸಕಲ ವೇದ ಶಾಸ್ತ್ರಗಳ ಸಾರವೂ ಈ ಮಾನಸ ಸರೋವರದಲ್ಲಿ ಸ್ನಾನ ಮಾಡಿದವರಿಗೆ ಲಭ್ಯವಾಗಿ ಸಕಲ ಪಾಪಗಳೂ ಪರಿಹಾರವಾಗಿ ಮೋಕ್ಷ ಪ್ರಾಪ್ತಿಯಾಗುವುದು ಎಂಬ ನಂಬಿಕೆ ಇದೆ.ಒಟ್ಟಿನಲ್ಲಿ ಸರೋವರದ ಪರಿಸರವು ಅವಶ್ಯಕವಾದ ಆನಂದದ ಅನುಭೂತಿಯನ್ನು ನೀಡುತ್ತದೆ.

ಮಾನಸ ಸರೋವರ ಹಾಗೂ ಕೈಲಾಸ ಪರ್ವತ ಒಂದೇ ತಾಣದಲ್ಲಿದ್ದು ಕೇವಲ ೩೦ ಕಿಮೀ ದೂರದಲ್ಲಿದೆ. ಮಾನಸ ಸರೋವರದಿಂದ ಕೈಲಾಸ ಪರ್ವತದ ದೃಶ್ಯ ವೀಕ್ಷಣೆ ಮಾತುಗಳಲ್ಲಿ ಬಣ್ಣಿಸಲಸಾಧ್ಯ ಮತ್ತು ಅವರ್ಣನೀಯ.

ಮಾನಸ ಸರೋವರದಲ್ಲಿ ಸ್ನಾನ,ಪೂಜಾ ಕೈಂಕರ್ಯ,ತರ್ಪಣದ ನಂತರ ಕೈಲಾಸ ಪರ್ವತದ ಪರಿಕ್ರಮ ಮಾಡಬೇಕಾಗುತ್ತದೆ.ಕೈಲಾಸ ಪರ್ವತವು ಪಾರ್ವತಿ ಪರಮೇಶ್ವರರ ವಾಸ ಸ್ಥಾನ ಶಿವಶಕ್ತಿಯ ಸಂಗಮ ಹಾಗಾಗಿ ಜೀವಾತ್ಮ-ಪರಮಾತ್ಮರ ಐಕ್ಯಸ್ಥಾನ.

ಕೈಲಾಸ ಮಾನಸ ಸರೋವರದ ಯಾತ್ರೆಯು ಯಾವುದೇ ದುರ್ಗಮ ತಾಣಗಳ ಸಾಹಸ ಪ್ರವಾಸಕ್ಕಿಂತ ಕಡಿಮೆಯೇನಲ್ಲ. ಅಸಾಧಾರಣ ಅಸಾಮಾನ್ಯ ಪರಿಸ್ಥಿತಿಗಳು ನಮಗರಿವಿಲ್ಲದಂತೆಯೇ ಬಂದೊದಗು
ತ್ತವೆ. ಹಾಗಾಗಿ ನಮಗೆ ಶಕ್ತವಾದಷ್ಟು ಪರಿಕರಗಳೊಂದಿಗೆ ಇಲ್ಲಾ ರೀತಿಯ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಲು ಅಥವಾ ಸಹಿಸಿಕೊಂಡು ಮುಂದುವರೆಯಲು ತಯಾರಿರಬೇಕು. ಎಲ್ಲರ ಅನುಭವದ ಪ್ರಕಾರ ಕೈಲಾಸ ಮಾನಸ ಸರೋವರ ಅತ್ಯಂತ ಪವಿತ್ರ ತೀರ್ಥಕ್ಷೇತ್ರ.ಯಾವುದೇ ಧರ್ಮಕ್ಕೆ ಸೇರಿದವರಿರಲೀ, ನಿರೀಶ್ವರವಾದಿಯಾಗಿರಲಿ. ಯಾತ್ರಿಕನು ತನಗೆ ತಿಳಿದೋ ತಿಳಿಯದೆಯೋ ಒಂದು ದೈವೀಶಕ್ತಿ ಅಜ್ಞಾತ ಪ್ರೇರಣೆಯಿಂದ ಆಕರ್ಷಿಸಲ್ಪಟ್ಟು ಚಿತ್ತ ಏಕಾಗ್ರತೆ ಪಡೆದುಕೊಳ್ಳುತ್ತಾನೆ. ಹಿಮಾಲಯ ಪರ್ವತ ಶ್ರೇಣಿಗಳಿಗೆ ಹೊಂದಿಕೊಳ್ಳದೇ ಹಿಮಾಲಯದಿಂದ ಅನತಿ ದೂರದಲ್ಲಿ ತನ್ನದೇ ಆದ ಹಿರಿಮೆಯಿಂದ ಮತ್ತು ವೈಭವದಿಂದ ಪ್ರತ್ಯೇಕವಾಗಿ ವಿಶಾಲವಾದ ಟಿಬೆಟ್ ಮೈದಾನ ಪ್ರದೇಶದಲ್ಲಿ ಆಕಾಶಕ್ಕೆ ಚುಂಬಿಸುವಂತೆ ಸದಾ ಹಿಮಾಚ್ಛಾದ್ರಿತವಾಗಿ, ಪ್ರಕಾಶಮಾನವಾಗಿ ವಿಶ್ವದ ಕೇಂದ್ರ ಬಿಂದುವಾಗಿ ವಿಜೃಂಬಿಸುತ್ತದೆ.

ಕೈಲಾಸ ಮಾನಸ ಸರೋವರ ಯಾತ್ರೆ ಎರಡು ಮಾರ್ಗಗಳಿಂದ ಸಾಧ್ಯವಾಗುತ್ತದೆ.

ಮೊದಲನೆಯದು ಭಾರತ ಸರ್ಕಾರದಿಂದ ಆಯೋಜಿಸಲ್ಪಟ್ಟ ಮಾರ್ಗ ದೆಹಲಿ-ಆಲ್ಮೋರ ಮೂಲಕ ಹಿಮಾಲಯವನ್ನು ಶ್ರೇಣಿಯನ್ನು ಪ್ರವೇಶಿಸಿ ಕಾಳೀ ನದಿಯಂಚಿನಲ್ಲಿ ಹಿಮಾಲಯವನ್ನು ದಾಟಿ ಟಿಬೆಟ್ ಪ್ರದೇಶದ ಮೂಲಕ ಕೈಲಾಸ ಮಾನಸ ಸರೋವರವನ್ನು ಸಂದರ್ಶಿಸಿ ಪುನಃ ಅದೇ ಮಾರ್ಗದಲ್ಲಿ ಹಿಂತಿರುಗುವುದು. ಇದಕ್ಕೆ ಬೇಕಾಗುವ ಕಾಲಾವಕಾಶ ೩೦ ದಿನಗಳು. ಇದಕ್ಕೆ ತಗಲುವ ವೆಚ್ಚ ಸುಮಾರು ೬೦,೦೦೦ ದಿಂದ ೭೦,೦೦೦ ರೂಪಾಯಿಗಳು.
ಎರಡನೇ ಮಾರ್ಗ ನೇಪಾಳದ ಕಠ್ಮಂಡುವಿನಿಂದ ಖಾಸಗಿ ಯಾತ್ರೆ ವಿಮಾನ ಹಾಗೂ ಬಸ್ ಮೂಲಕ ಕಠ್ಮಂಡು ಹಾಗೂ ಚೀನಾದ ಗಡಿಭಾಗವಾದ ನ್ಯಾಲಮ್ ನಿಂದ ಜಾಂಗ್ಮೂ ಮೂಲಕ ಲ್ಯಾಂಡ್ ರೋವರ್ ವಾಹನಗಳಲ್ಲಿ ಮಾನಸ ಸರೋವರದ ದಡದವರೆಗೆ (೧೨೦೦ ಕಿಮಾ) ಪ್ರಯಾಣಿಸಿ ನಂತರ ಮೂರು ದಿನಗಳ ಕೈಲಾಸ ಪರ್ವತದ ಪರಿಕ್ರಮ (ಪ್ರದಕ್ಷಿಣೆ) ಒಟ್ಟು ೬೦ ಕಿಮೀ ನಡಿಗೆಯ ಮೂಲಕ ಒಟ್ಟು ೨೦,೦೦೦ ಅಡಿಗಳ ಎತ್ತರದಿಂದ ಹಾದು ಹೋಗಬೇಕಾಗುತ್ತದೆ.ನಂತರ ಬಂದ ದಾರಿಯಲ್ಲೇ ಹಿಂತಿರುಗಬೇಕಾಗುತ್ತದೆ. ಇದಕ್ಕೆ ಬೇಕಾಗುವ ಕಾಲಾವಕಾಶ ೧೬ ದಿನಗಳು (ವಿಮಾನಯಾನ ಮೂಲಕ) ೧೮-೨೦ ದಿನಗಳು (ವಿಮಾನಯಾನ-ರೈಲು ಮುಖಾಂತರ)ಇದಕ್ಕೆ ತಗಲುವ ವೆಚ್ಚ ಸುಮಾರು ೮೦,೦೦೦ ರೂಪಾಯಿಗಳು.

ಮಾನಸಸರೋವರ

ಮಾನಸರೋವರ ಟಿಬೆಟ್ ನ ಲ್ಹಾಸಾ ದಿಂದ ಸುಮಾರು ೨೦೦೦ ಕಿ.ಮೀ.ದೂರದಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ಒಂದು ಸಿಹಿನೀರ ಸರೋವರ. ಮಾನಸಸರೋವರದ ಪಶ್ಚಿಮಕ್ಕೆ ರಾಕ್ಷಸತಾಲ್ ಎಂಬ ಇನ್ನೊಂದು ಸರಸ್ಸು ಮತ್ತು ಉತ್ತರಕ್ಕೆ ಕೈಲಾಸಪರ್ವತಗಳಿವೆ.

ಮಾನಸಸರೋವರವು ಸಮುದ್ರಮಟ್ಟದಿಂದ ೪೫೫೬ ಮೀ. ಎತ್ತರದಲ್ಲಿದೆ. ಇದು ಪ್ರಪಂಚದಲ್ಲಿ
ಅತಿ ಎತ್ತರದಲ್ಲಿರುವ ಸಿಹಿನೀರಿನ ಸರಸ್ಸು. ಮಾನಸಸರೋವರದ ಆಕಾರ ಸರಿಸುಮಾರು ವರ್ತುಲ. ಚಳಿಗಾಲದಲ್ಲಿ ಮಾನಸಸರೋವರವು ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ. ಸಿಂಧೂನದಿ, ಸಟ್ಲೆಜ್ ನದಿ, ಕರ್ನಾಲಿ ನದಿ ಮತ್ತು ಯಾರ್ಲುಂಗ್ ತ್ಸಾಂಗ್ಪೋ ನದಿ (ಬ್ರಹ್ಮಪುತ್ರ ನದಿ)ಗಳೆಲ್ಲವೂ ಮಾನಸಸರೋವರದ ಆಸುಪಾಸಿನಲ್ಲಿ ಉಗಮಿಸುತ್ತವೆ.

ಸಾಂಸ್ಕೃತಿಕ ಮಹತ್ವ
ಮಾನಸಸರೋವರ ಮತ್ತು ಕೈಲಾಸಪರ್ವತಗಳು ಧಾರ್ಮಿಕ ಮಹತ್ವ ಹೊಂದಿವೆ. ಭಾರತ, ಟಿಬೆಟ್ ಮತ್ತು ನೆರೆಹೊರೆಯ ದೇಶಗಳಿಂದ ಸಹಸ್ರಾರು ಜನರು ಈ ಎರಡೂ ಸ್ಥಳಗಳಿಗೆ ತೀರ್ಥಯಾತ್ರೆ ಕೈಗೊಳ್ಳುವರು. ಮಾನಸಸರೋವರದಲ್ಲಿ ಸ್ನಾನ ಮತ್ತು ಸರಸ್ಸಿನ ಜಲವನ್ನು ಪಾನಮಾಡುವುದರಿಂದ ಎಲ್ಲಾ ಪಾಪಗಳಿಂದ ವಿಮೋಚನೆ ದೊರೆಯುವುದೆಂದು ಶ್ರದ್ಧಾಳುಗಳ ನಂಬಿಕೆ.ಭಾರತ ಸರಕಾರದ ನಿರ್ದೇಶನದಲ್ಲಿ ಪ್ರತಿವರ್ಷವೂ ಇಲ್ಲಿಗೆ ತೀರ್ಥಯಾತ್ರೆ ಆಯೋಜಿಸಲಾಗುತ್ತದೆ.

ಹಿಂದೂ ಧರ್ಮದ ಪ್ರಕಾರ ಈ ಸರಸ್ಸು ಮೊದಲಿಗೆ ಬ್ರಹ್ಮನ ಮನಸ್ಸಿನಲ್ಲಿ ಸೃಷ್ಟಿಸಲ್ಪಟ್ಟಿತು. ಆದ್ದರಿಂದಲೇ ಮಾನಸಸರೋವರವೆಂಬ ಹೆಸರು ಈ ಸರಸ್ಸಿಗೆ ಬಂದಿದೆ. ಪ್ರತಿ ದಿನ ಬ್ರಾಹ್ಮೀ ಮುಹೂರ್ತದಲ್ಲಿ ದೇವತೆಗಳು ಸ್ನಾನಕ್ಕಾಗಿ ಈ ಸರೋವರಕ್ಕೆ ಆಗಮಿಸುವರೆಂಬುದು ಇನ್ನೊಂದು ನಂಬಿಕೆ. ಬೌದ್ಧಧರ್ಮೀಯರಿಗೂ ಈ ಸ್ಥಾನ ಪವಿತ್ರ ಕ್ಷೇತ್ರ. ರಾಣಿ ಮಾಯಾ ಬುದ್ಧನನ್ನು ಅನವತಪ್ತ ಅಥವಾ ಅನತೊತ್ತ ಎಂದು ಬೌದ್ಧರಿಂದ ಕರೆಯಲ್ಪಡುವ ಈ ಸ್ಥಳದಲ್ಲಿ ತನ್ನ ಗರ್ಭದಲ್ಲಿ ಧರಿಸಿದಳೆಂದು ಒಂದು ನಂಬಿಕೆ.ಈ ಸರೋವರದ ದಡದಲ್ಲಿ ಅನೇಕ ಬೌದ್ಧವಿಹಾರಗಳಿವೆ.

ಕೈಲಾಸಪರ್ವತ
ಕೈಲಾಸ ಪರ್ವತವು ಟಿಬೆಟ್ ನ ಹಿಮಾಲಯ ಶ್ರೇಣಿಯ ಗಾಂಗ್ ಡೈಸ್ ಸರಣಿಯ ಒಂದು ಶಿಖರ.ಈ ಪರ್ವತಪ್ರದೇಶವು ಏಷ್ಯಾದ ಹಲವು ಮಹಾನದಿಗಳಿಗೆ ಮೂಲಸ್ಥಾನವಾಗಿದೆ. ಸಿಂಧೂ ನದಿ, ಸಟ್ಲೆಜ್ ನದಿ ಮತ್ತು ಬ್ರಹ್ಮಪುತ್ರ ಈ ಆಸುಪಾಸಿನಲ್ಲಿಯೇ ಉಗಮಿಸುತ್ತವೆ. ಕೈಲಾಸಪರ್ವತವು ಹಿಂದೂ, ಬೌದ್ಧ, ಜೈನ ಮತ್ತು ಬಾನ್ ಧರ್ಮೀಯರಿಗೆ ಪವಿತ್ರ ತಾಣವಾಗಿದೆ. ಹಿಂದೂ ನಂಬಿಕೆಗಳ ಪ್ರಕಾರ ಕೈಲಾಸಪರ್ವತವು ಪರಶಿವನ ನೆಲೆ. ಕೈಲಾಸಪರ್ವತವು ಟಿಬೆಟ್ ನಲ್ಲಿ ಮಾನಸಸರೋವರ ಮತ್ತು ರಾಕ್ಷಸ್ ತಾಲ್ ಗಳ ಮಗ್ಗುಲಲ್ಲಿದೆ.

ಕೈಲಾಸಪರ್ವತದ ಆರೋಹಣವನ್ನು ಮಾಡಿದುದರ ಬಗೆಗೆ ಯಾವುದೇ ದಾಖಲೆಗಳಿಲ್ಲ.
ಹಿಂದೂ ಮತ್ತು ಬೌದ್ಧ ಧರ್ಮೀಯರು ಕೈಲಾಸಪರ್ವತವನ್ನು ಅತಿ ಪವಿತ್ರ ತಾಣವಾಗಿ ಪರಿಗಣಿಸುವುದರಿಂದಾಗಿ ಈ ಪರ್ವತವನ್ನು ಏರಲು ಯಾರಿಗೂ ಅನುಮತಿ ದೊರೆಯುವುದಿಲ್ಲ.ಹೀಗಾಗಿ ಜಗತ್ತಿನ ಪ್ರಮುಖ ಶಿಖರಗಳ ಪೈಕಿ ಕೈಲಾಸಪರ್ವತವೊಂದು ಮಾತ್ರ ಆರೋಹಿಸಲ್ಪಡದೇ ಉಳಿದಿದೆ. ಶಿಖರವು ಸಮುದ್ರಮಟ್ಟದಿಂದ ೨೧,೭೭೮ ಅಡಿಗಳಷ್ಟು ಎತ್ತರದಲ್ಲಿದೆಯೆಂದು ಅಂದಾಜು ಮಾಡಲಾಗಿದೆ

ಹೆಸರುಗಳು

ಕೈಲಾಸ ಎಂಬ ಪದಕ್ಕೆ ಸಂಸ್ಕೃತ ಭಾಷೆಯಲ್ಲಿ ಸ್ಫಟಿಕ ಎಂಬ ಅರ್ಥವು ಇದೆ. ಟಿಬೆಟನ್ ಭಾಷೆಯಲ್ಲಿ ಈ ಪರ್ವತದ ಹೆಸರು ಗಾಂಗ್ಸ್ ರಿನ್-ಪೋ-ಚೆ. ಇದರ ಅರ್ಥವು "ಹಿಮದ ರತ್ನ" ವೆಂದಾಗುವುದು. ಇನ್ನೊದು ಸ್ಥಳೀಯ ಹೆಸರು ಟಿಸೆ. ಜೈನ ಪರಂಪರೆಯಲ್ಲಿ ಕೈಲಾಸಪರ್ವತವನ್ನು ಅಷ್ಟಪಾದ ಎಂದು ಉಲ್ಲೇಖಿಸಲಾಗಿದೆ.

ಧಾರ್ಮಿಕ ಮಹತ್ವ
ಹಿಂದೂ ಧರ್ಮದಲ್ಲ
ಕೈಲಾಸಪರ್ವತದಲ್ಲಿ ತನ್ನ ಪತ್ನಿ ಪಾರ್ವತಿ ಮತ್ತು ಪುತ್ರರಾದ ಕಾರ್ತಿಕೇಯ ಮತ್ತು ಗಣೇಶರೊಂದಿಗೆ ಪರಶಿವ.

ಹಿಂದೂಧರ್ಮದ ಪ್ರಕಾರ ಪರಶಿವನು ಕೈಲಾಸಪರ್ವತದ ಶಿಖರದ ಮೇಲೆ ಹಿಮವಂತನ ಪುತ್ರಿ ಪಾರ್ವ
ತಿಯೊಂದಿಗೆ ನೆಲೆಸಿರುವನು. ಶಿವನು ಇಲ್ಲಿ ಸದಾ ಧ್ಯಾನಮಗ್ನನಾಗಿರುತ್ತನೆ. ಅಲ್ಲದೇ ಧನಾಧಿಪತಿ ಕುಬೇರನ ನೆಲೆಯು ಸಹ ಕೈಲಾಸಪರ್ವತದ ಸನಿಹದಲ್ಲಿಯೇ ಎಂದು ಹೇಳಲಾಗುತ್ತದೆ.ಹಿಂದೂಧರ್ಮದ ಅನೇಕ ಶಾಖೆಗಳು ಕೈಲಾಸಪರ್ವತವನ್ನು ಸ್ವರ್ಗ, ಆತ್ಮದ ಅಂತಿಮ ನೆಲೆ ಮತ್ತು ವಿಶ್ವದ ಪರಮೋನ್ನತ ಅಧ್ಯಾತ್ಮಿಕ ಕೇಂದ್ರವೆಂದು ಪರಿಗಣಿಸುತ್ತವೆ. ವಿಷ್ಣುಪುರಾಣದ ಪ್ರಕಾರ ಕೈಲಾಸಪರ್ವತವು ಜಗತ್ತಿನ ಕೇಂದ್ರ ಮತ್ತು ಅದರ ನಾಲ್ಕು ಮುಖಗಳು ಸ್ಪಟಿಕ, ಪದ್ಮರಾಗ, ಸ್ವರ್ಣ ಮತ್ತು ನೀಲವೈಢೂರ್ಯದಿಂದ ಮಾಡಲ್ಪಟ್ಟಿವೆ. ಕೈಲಾಸಪರ್ವತವು ಜಗತ್ತಿನ ಆಧಾರಸ್ಥಂಭ. ಅದರ ಎತ್ತರ ೮೪೦೦೦ ಯೋಜನಗಳಷ್ಟು. ಅದು ವಿಶ್ವಮಂಡಲದ ಕೇಂದ್ರವಾಗಿದ್ದು ಪದ್ಮಾಕೃತಿಯಲ್ಲಿ ಹಬ್ಬಿರುವ ಆರು ಪರ್ವತಶ್ರೇಣಿಗಳ ಕೇಂದ್ರಸ್ಥಾನದಲ್ಲಿದೆ. ಕೈಲಾಸಪರ್ವತದಿಂದ ಹೊರಹರಿಯುವ ನಾಲ್ಕು ನದಿಗಳು ನಾಲ್ಕೂ ದಿಕ್ಕಿನಲ್ಲಿ ಪ್ರವಹಿಸಿ ಜಗತ್ತನ್ನು ನಾಲ್ಕು ಪ್ರದೇಶಗಳನ್ನಾಗಿ ವಿಭಜಿಸಿವೆ. ಜಗತ್ತಿನ ಅತ್ಯಂತ ದೊಡ್ಡ ಮತ್ತು ಅತಿ ಪ್ರಮುಖ ಶಿಲೆಯಲ್ಲಿ ಕೊರೆದು ಮಾಡಿರುವ ದೇವಾಲಯವೆಂದರೆ ಎಲ್ಲೋರಾದ ಕೈಲಾಸ ದೇಗುಲ. ಇದಕ್ಕೆ ಕೈಲಾಸಪರ್ವತವೇ ಸ್ಫೂರ್ತಿ. ಈ ದೇವಸ್ಥಾನದ ಅನೇಕ ಶಿಲ್ಪಗಳು ಶಿವಪಾರ್ವತಿಯರಿಗೆ ಸಂಬಂಧಿಸಿದ ಘಟನಾವಳಿಗಳನ್ನು ತೋರಿಸುತ್ತವೆ. ಇವುಗಳ ಪೈಕಿ ರಾವಣನು ಕೈಲಾಸಪರ್ವತವನ್ನು ಬುಡಸಮೇತ ಕೀಳಲು ನಡೆಸಿದ ಪ್ರಯತ್ನವೂ ಒಂದು.

ಬೌದ್ಧ ಧರ್ಮದಲ್ಲಿ ಕೈಲಾಸಪರ್ವತ

ತಾಂತ್ರಿಕ ಬೌದ್ಧರು ಕೈಲಾಸಪರ್ವತವು ಪರಮೋನ್ನತ ಆತ್ಮಾನಂದವನ್ನು ಪ್ರತಿನಿಧಿಸುವ ಡೆಮ್ ಚೋಕ್ ಬುದ್ಧನ (ಡೆಮ್ ಚೋಗ್ ಮತ್ತು ಚಕ್ರಸಂವರ ಎಂಬ ಇತರ ಹೆಸರುಗಳು ಈತನಿಗೆ) ನೆಲೆಯೆಂದು ನಂಬುತ್ತಾರೆ. ತಾಂತ್ರಿಕ ಬೌದ್ಧಧರ್ಮದ ಮುಂದಾಳಾಗಿದ್ದ ಮಿಲರೇಪನು ಬಾನ್ ಧರ್ಮದ ನಾಯಕನಾಗಿದ್ದ ನಾರೋ-ಬೊಂಚುಂಗ್ ನಿಗೆ ಸವಾಲೆಸೆಯಲು ಟಿಬೆಟ್ ಗೆ ಆಗಮಿಸಿದನು. ಈರ್ವರ ಮಧ್ಯೆ ಮಾಯಮಂತ್ರಗಳ ತೀವ್ರ ಕದನ ನಡೆದು ಯಾರೂ ಜಯ ಸಾಧಿಸಲಾಗಲಿಲ್ಲ.ಕೊನೆಗೆ ಇಬ್ಬರಲ್ಲಿ ಯಾರು ಕೈಲಾಸಪರ್ವತದ ಶಿಖರವನ್ನು ಹೆಚ್ಚು ವೇಗವಾಗಿ ತಲುಪುವರೋ ಅವರೇ ವಿಜಯಿಯಾಗುವರೆಂದು ತೀರ್ಮಾನಿಸಲಾಯಿತು. ನಾರೋ-ಬೊಂಚುಂಗ್ ಮಾಯಾಪಾತ್ರೆಯೊಂದರ ಮೇಲೆ ಕುಳಿತು ಶಿಖರದತ್ತ ಧಾವಿಸತೊಡಗಿದರೆ ಮಿಲರೇಪನು ಮೌನವಾಗಿ ಕುಳಿತು ಧ್ಯಾನಮಗ್ನನಾದನು. ಆದರೆ ನಾರೋ-ಬೊಂಚುಂಗ್ ಇನ್ನೇನು ಶಿಖರವನ್ನು ಮುಟ್ಟಬೇಕೆನ್ನುವಷ್ಟರಲ್ಲಿ ಮಿಲರೇಪನು ಎದ್ದು ಸೂರ್ಯಕಿರಣಗಳ ಮೇಲೇರಿ ಶಿಖರವನ್ನು ಮೊದಲು ತಲುಪಿ ಸ್ಫರ್ದೆಯಲ್ಲಿ ವಿಜಯಿಯಾದನು. ಈತನಿಂದ ಟಿಬೆಟ್ ಗೆ ತಾಂತ್ರಿಕ ಬೌದ್ಧ ಧರ್ಮವು ಆಗಮಿಸಿತೆಂದು ನಂಬಿಕೆ. ( ಸೂಚನೆ : ಟಿಬೆಟ್ ಗೆ ತಾಂತ್ರಿಕ ಬೌದ್ಧಧರ್ಮವನ್ನು ತಂದವನು ಮಲಿರೇಪನೋ ಅಥವಾ ಪದ್ಮಸಂಭವನೋ ಎಂಬ ಬಗ್ಗೆ ಸಾಕಷ್ಟು ಗೊಂದಲವಿರುವುದು.)

ಜೈನಧರ್ಮದಲ್ಲಿ

ಕೈಲಾಸಪರ್ವತವನ್ನು ಅಷ್ಟಪಾದವೆಂದು ಕರೆಯುವ ಜೈನರು ತಮ್ಮ ಧರ್ಮದ ಮೂಲಪುರುಷ ಋಷಭದೇವನು ಈ ಸ್ಥಳದಲ್ಲಿ ನಿರ್ವಾಣ ಹೊಂದಿದನೆಂದು ನಂಬುವರು.

ಬಾನ್ ಧರ್ಮದಲ್ಲಿ

ಟಿಬೆಟ್ ನಲ್ಲಿ ಬೌದ್ಧಧರ್ಮಕ್ಕಿಂತ ಹಿಂದಿನದಾದ ಬಾನ್ ಧರ್ಮದ ಪ್ರಕಾರ ಈ ಸಂಪೂರ್ಣ ಪ್ರದೇಶ ಮತ್ತು ಒಂಭತ್ತು ಅಂತಸ್ತಿನ ಸ್ವಸ್ತಿಕ ಪರ್ವತವು ವಿಶ್ವದ ಸರ್ವ ಅಧ್ಯಾತ್ಮಿಕ ಶಕ್ತಿಗಳ ನೆಲೆ.

ತೀರ್ಥಯಾತ್ರೆ

ಸಹಸ್ರಾರು ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯದಂತೆ ಪ್ರತಿ ವರ್ಷ ದೊಡ್ಡ ಸಂಖ್ಯೆಯಲ್ಲಿ ಆಸ್ತಿಕರು ಕೈಲಾಸಪರ್ವತಕ್ಕೆ ತೀರ್ಥಯಾತ್ರೆ ಕೈಗೊಳ್ಳುವರು. ಹಲವು ಧರ್ಮದ ಶ್ರದ್ಧಾಳುಗಳು ಕೈಲಾಸಪರ್ವತಕ್ಕೆ ಕಾಲ್ನಡಿಗೆಯಲ್ಲಿ ಸುತ್ತುಬರುವುದು ಒಂದು ಪಾವನ ಕಾಯಕವೆಂದು ಭಾವಿಸುತ್ತಾರೆ. ಹಿಂದೂಗಳು ಮತ್ತು ಬೌದ್ಧರು ಪರ್ವತಕ್ಕೆ ಪ್ರದಕ್ಷಿಣವಾಗಿ ಸುತ್ತು ಬಂದರೆ ಜೈನರು ಮತ್ತು ಬಾನ್ ಧರ್ಮೀಯರು ಕೈಲಾಸಪರ್ವತಕ್ಕೆ ಅಪ್ರದಕ್ಷಿಣವಾಗಿ ಸುತ್ತು ಬರುತ್ತಾರೆ. ಪರ್ವತವನ್ನು ಒಂದು ಬಾರಿ ಸುತ್ತಿಬರಬೇಕಾದರೆ ೫೨ ಕಿ.ಮೀ. ಗಳಷ್ಟು ಉದ್ದದ ದಾರಿಯನ್ನು ಕ್ರಮಿಸಬೇಕಾಗುವುದು.

ಕೆಲವು ಯಾತ್ರಿಕರು ಕೈಲಾಸಪರ್ವತವನ್ನು ಒಂದೇ ದಿನದಲ್ಲಿ ಸುತ್ತಿಬರಬೇಕೆಂದು ನಂಬುವರು.ಆದರೆ ಒರಟು ಮೇಲ್ಮೈ, ಉನ್ನತಪ್ರದೇಶದಲ್ಲುಂಟಾಗುವ ಅಸ್ವಾಸ್ಥ್ಯ ಮತ್ತು ಪ್ರತಿಕೂಲ ವಾತಾವರಣಗಳಿಂದಾಗಿ ಇದು ಕಠಿಣಸಾಧ್ಯ ಮತ್ತು ಕೆಲವೇ ಕೆಲವ
ರು ಮಾತ್ರ ಇದನ್ನು ಸಾಧಿಸುವರು. ಕೆಲವು ಭಕ್ತರು ಇಡೀ ಪರ್ವತಕ್ಕೆ ಅಂಗಪ್ರದಕ್ಷಿಣೆಯನ್ನು ಸಹ ಮಾಡುವರು. ಈ ಕ್ರಮದಲ್ಲಿ ಪ್ರತಿ ಹೆಜ್ಜೆಗೊಮ್ಮೆ ಭಕ್ತರು ಪರ್ವತಕ್ಕೆ ದೀರ್ಘದಂಡ ನಮಸ್ಕಾರ ಮಾಡಿ ಆ ಸ್ಥಾನವನ್ನು ಬೆರಳಿನಿಂದ ಗುರುತಿಸಿ ನಂತರ ಮಂಡಿಯೂರಿ ಪ್ರಾರ್ಥನೆ ಸಲ್ಲಿಸಿ ಮುಂದೆ ಕೈಗಳು ಮತ್ತು ಮಂಡಿಯ ಮೇಲೆ ಮೊದಲು ಗುರುತಿಸಿದ್ದ ಸ್ಥಾನಕ್ಕೆ ತೆವಳುವರು.ಈ ಪ್ರಕಾರದ ಅಂಗಪ್ರದಕ್ಷಿಣೆಯ ಮೂಲಕ ಕೈಲಾಸಪರ್ವತವನ್ನು ಒಂದು ಬಾರಿ ಸುತ್ತಿಬರಲು ಕನಿಷ್ಟ ನಾಲ್ಕು ದಿನಗಳು ತಗಲುತ್ತವೆಯಲ್ಲದೆ ಅತಿ ತೀವ್ರವಾದ ದೈಹಿಕ ದಂಡನೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ.

ಕೈಲಾಸಪರ್ವತವು ಟಿಬೆಟ್ ನ ಹಿಮಾಲಯದಲ್ಲಿ ಅತಿ ದುರ್ಗಮ ಪ್ರಾಂತ್ಯದಲ್ಲಿ ಮತ್ತು ಪ್ರತಿಕೂಲ ಪರಿಸರದಲ್ಲಿದೆ. ಈಚೆಗೆ ಯಾತ್ರಿಕರಿಗೆ ಕೆಲವು ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವ ದಿಸೆಯಲ್ಲಿ ಪ್ರಯತ್ನಗಳು ಸಾಗಿವೆ. ಕೈಲಾಸಪರ್ವತವನ್ನು ಪೂಜಿಸುವ ಎಲ್ಲ ಧರ್ಮಗಳ ಪ್ರಕಾರ ಪರ್ವತಕ್ಕೆ ಕಾಲು ಸೋಕಿಸುವುದು ಅತಿ ಘೋರ ಪಾಪದ ಕಾರ್ಯ.ಇದನ್ನು ಮೀರಿ ಪರ್ವತವನ್ನು ಏರಲು ಹೊರಟವರು ಪ್ರಾಣಕಳೆದುಕೊಂಡರೆಂದು ಜನರ ಹೇಳಿಕೆ

೧೯೫೦ರಲ್ಲಿ ಚೀನೀಯರಿಂದ ಟಿಬೆಟ್ ನ ಆಕ್ರಮಣ ಮತ್ತು ಭಾರತ-ಚೀನಾಗಳ ನಡುವೆ ಸಂಭವಿಸಿದ ಘರ್ಷಣೆಗಳಿಂದಾಗಿ ೧೯೫೯ ರಿಂದ ೧೯೮೦ ರ ವರೆಗೆ ಕೈಲಾಸಪರ್ವತದ ಯಾತ್ರೆ ನಿಂತುಹೋಗಿತ್ತು. ೧೯೮೦ರ ನಂತರ ಪ್ರತಿವರ್ಷ ಭಾರತದಿಂದ ಕೈಲಾಸಪರ್ವತಕ್ಕೆ ತೀರ್ಥಯಾತ್ರೆ ಕೈಗೊಳ್ಳಲು ನಿಗದಿತ ಸಂಖ್ಯೆಯ ಯಾತ್ರಿಕರಿಗೆ ಪರವಾನಿಗಿ ನೀಡಲಾಗುತ್ತಿದೆ. ಈ ಯಾತ್ರೆಯು ಭಾರತ ಮತ್ತು ಚೀನಾ ಸರಕಾರಗಳ ಮಾರ್ಗದರ್ಶನ ಮತ್ತು ನಿರ್ದೇಶನದಡಿ ನಡೆಯುವುದು.ಭಾರತೀಯರು ಸಾಮಾನ್ಯವಾಗಿ ಉತ್ತರಾಖಂಡದ ಕುಮಾವ್ ಹಿಮಾಲಯವನ್ನು ಕಾಲ್ನಡಿಗೆಯಲ್ಲಿ ದಾಟಿ ಕೈಲಾಸಪರ್ವತವನ್ನು ತಲುಪುವರು.ಈ ಪಾದಯಾತ್ರೆಯು ಅತಿ ದೀರ್ಘದಾರಿಯದು ಮತ್ತು ಅಪಾಯಕಾರಿ ಕೂಡ. ಬೇರೆ ಮಾರ್ಗಗಳೆಂದರೆ ಕಾಠ್ಮಂಡುವಿನಿಂದ ಅಥವಾ ಲ್ಹಾಸಾದಿಂದ ರಸ್ತೆಯ ಮೇಲಿನ ಪಯಣ.ಕಾಠ್ಮಂಡು ಮತ್ತು ಲ್ಹಾಸಾಗಳನ್ನು ಭಾರತದಿಂದ ವಿಮಾನಯಾನದ ಮೂಲಕ ತಲುಪಬಹುದು.

ಪವಿತ್ರ ಕೈಲಾಸಪರ್ವತದ ಪ್ರದಕ್ಷಿಣೆಯನ್ನು ಕಾಲ್ನಡಿಗೆಯಿಂದ ಅಥವಾ ಕುದುರೆಯ ಮೇಲೆ ಕುಳಿತು ಮಾಡಬಹುದು. ಕಾಲ್ನಡಿಗೆಯು ೧೫೦೦೦ ಅಡಿ ಎತ್ತರದಲ್ಲಿ ಆರಂಭವಾಗಿ ಮುಂದೆ ೧೯೦೦೦ ಅಡಿ ಎತ್ತರದಲ್ಲಿ ಡೋಲ್ಮಾ ಪಾಸ್ ಅನ್ನು ದಾಟಬೇಕಾಗುವುದು. ಇದು ಒಟ್ಟು ಮೂರು ದಿನಗಳ
ಹಾದಿ








Mount Kailash
Elevation : 6,638 m (21,778 ft)
Location : China (Tibet)
Range : Trans-Himalayas
Prominence : 1,319 m
Coordinates : 31°04′00″N, 81°18′45″E
Mount Kailash is a peak in the Gangdisê mountains which is part of the Himalayas in Tibet, the source of some of the longest rivers in Asia—the Indus River, the Sutlej River, a tributary of the Indus River, and the Brahmaputra River—and is considered as a sacred place in four religions—Hinduism, Buddhism, Jainism and Bön faith. In Hindu religion, it is considered to be the abode of Lord Shiva. The mountain lies near Lake Manasarowar and Lake Rakshastal in Tibet.

There have been no recorded attempts to climb Mount Kailash; it is considered off limits to climbers in deference to Buddhist and Hindu beliefs. It is the most significant peak in the world that has not seen any known climbing attempts.
The word Kailāśā means "crystal" in Sanskrit. The Tibetan name for the mountain is Gangs Rin-po-che, meaning "precious jewel of snows". Another local name for the mountain is Tisé Mountain. In the Jain tradition, the mountain is referred to as Ashtapada.

Religious significance : In Hinduism
According to Hinduism, Shiva, the destroyer of evil and sorrow, resides at the summit of a legendary mountain named Kailāśā, where he sits in a state of perpetual meditation along with his wife Pārvatī, the daughter of Himalaya. Kubera, the god of wealth was also said to have his abode on or near the mountain.

This Kailāśā is regarded in many sects of Hinduism as paradise, the ultimate destination of souls and the spiritual center of the world. Some traditions also aver that the mountain is Shiva's linga and Lake Manasarowar below is the yoni of His consort. According to one description in the Vishnu Purana, Mount Kailash is the center of the world, its four faces are made of crystal, ruby, gold, and lapis lazuli. It is the pillar of the world; is 84,000 leagues high; is the center of the world mandala; and is located at the heart of six mountain ranges symbolizing a lotus. The four rivers flowing from Kailash then flow to the four quarters of the world and divide the world into four regions.

The largest and most important rock-cut temple, Kailash Temple at Ellora,Maharashtra is named after Mount Kailash. Many of its sculptures and reliefs depict episodes relating to Shiva and Parvati, including the demon Ravana's attempt to dislodge them by shaking Mount Kailash.




No comments:

Post a Comment